ಸಾಹಿತ್ಯ ಬದುಕಿನ ಗತಿಬಿಂಬವಾಗಿ ಮನುಷ್ಯ ಸಮಾಜದ ಸೂಕ್ಷ್ಮಾತಿಸೂಕ್ಷ್ಮ ಸಂವೇದನೆಗಳನ್ನು ಸೆರೆಹಿಡಿಯುವ ಪ್ರಕ್ರಿಯೆಯಲ್ಲಿ ತೊಡಗಿದೆ. ಸಣ್ಣಕತೆ ಕಾದಂಬರಿಗಳು ಸಮಕಾಲೀನ ಜೀವನದ ಜೀವದ್ರವ್ಯಗಳನ್ನು ಅತ್ಯಂತ ವೈಶಿಷ್ಟ್ಯಪೂರ್ಣವಾಗಿ, ವೈವಿಧ್ಯಮಯವಾಗಿ ಎಲ್ಲ ಆಯಾಮಗಳ ದರ್ಶನವನ್ನು ಮಾಡಿಸುತ್ತದೆ.
ಕನ್ನಡ ದಲಿತ ಪ್ರಜ್ಞೆಯ, ತೀವ್ರ ಸಂವೇದನೆಯ ಲೇಖಕರಾದ ದೇವನೂರ ಮಹಾದೇವ ಅವರ `ಒಡಲಾಳ ದಲಿತರ ಬದುಕಿನ ಪರಿಪೂರ್ಣ ಚಿತ್ರಣ ನೀಡುವ ಕಾವ್ಯಮಯವಾದ ಕಾದಂಬರಿಯಾಗಿದೆ. ಯಾವ ಕಾಲದಲ್ಲಿ ದಲಿತ ಪ್ರಜ್ಞೆ, ಪ್ರತಿಭಟನೆ, ಘೋಷಣೆ, ಸಿದ್ಧಾಂತದ ಹಂತದಲ್ಲಿತ್ತೋ ಅದೇ ಕಾಲದಲ್ಲಿ ಅತ್ಯಂತ ಸೂಕ್ಷ್ಮ ಸಂವೇದನೆಯ ಸುಂದರ ಕಲಾಕೃತಿ ಮೂಡಿಬಂದಿರುವುದು ಕನ್ನಡ ಸಾಹಿತ್ಯ ವಿಸ್ಮಯಗಳಲ್ಲೊಂದು.
ಶೋಷಿತರ ಬದುಕಿನ ಅವಮಾನ, ಬಡತನ, ದ್ವೇಷ, ಅಸೂಹೆಗಳ ಮಧ್ಯದಲ್ಲಿ ಚಿಲ್ಲರೆ ಮನಸ್ಸು, ಕುಟುಂಬದ ಆಂತರಿಕ ಕಲಹ, ಮೇಲ್ವರ್ಗದವರ ದರ್ಪ-ದೌರ್ಜನ್ಯ, ಅಧಿಕಾರಶಾಹಿ ನಡೆಸುವ ಕ್ರೌರ್ಯ ಅಟ್ಟಹಾಸಗಳ ಚಿತ್ರಣ ಏಕಸೂತ್ರದಡಿಯಲ್ಲಿ ಒಂದು ಸುಂದರ ಶಿಲ್ಪವಾಗಿ ಒಡಲಾಳದಲ್ಲಿ ಅನಾವರಣಗೊಂಡಿದೆ.
ಭೂಮಿತೂಕದ, ಸಾಕುವ ಸಾಮರ್ಥ್ಯವುಳ್ಳ ತಾಯಿ ಅಸಹಾಯಕಳಾಗಿ ತನ್ನ ಕಾಲಪ್ರಜ್ಞೆಯ ಸಂಕೇತವಾದ ಹುಂಜವನ್ನು ಕಳೆದುಕೊಂಡು ದಯನೀಯ ಸ್ಥಿತಿ ತಲುಪಿದೆಯಂಬುದಕ್ಕೆ ನಿದರ್ಶನ ಸಾಕವ್ವನ ಪಾತ್ರ. ಮೂರು ಗಂಡು ಎರಡು ಹೆಣ್ಣುಮಕ್ಕಳ ತಾಯಿಯಾದ ಸಾಕವ್ವ ಈ ಕಾದಂಬರಿಯ ಕೇಂದ್ರ ಶಕ್ತಿಯಾಗಿದ್ದಾಳೆ ; ಪಾಲನಸಕ್ತಿಯ ಪ್ರತೀಕವಾಗಿದ್ದಾಳೆ. ಕಾಳಣ್ಣ ಕತ್ತಲೆಯ ಅಜ್ಞಾನದ ದಲಿತ ಬದುಕನ್ನು ಒಪ್ಪಿಕೊಂಡು ಅದರಲ್ಲಿಯೇ ಸಾರ್ಥಕತೆಯನ್ನು ಕಾಣುವ ವ್ಯಕ್ತಿ. ಗಂಡನನ್ನು, ಕೇರಿಯ ರೀತಿ ನೀತಿಗಳನ್ನು ಪರಿಪಾಲಿಸುವ ವಿಧೇಯ ವ್ಯಕ್ತಿ ಕಾಳಣ್ಣನ ಹೆಂಡತಿ. ಎರಡನೆಯ ಮಗ ಸಣ್ಣಯ್ಯ ಒಂದಿಷ್ಟು ಆರ್ಥಿಕ ಬಲವನ್ನು ಹೊಂದಿದವನಾಗಿ ಕಂಡುಬರುವುದು ಹೆಂಡತಿ ಚಲುವಮ್ಮನ ಪ್ರಭಾವದಿಂದ. ಒಂದು ಕಡೆ ತಾಯಿಯ ಆಸ್ತಿಯ ನಿಜ ವಾರಸುದಾರನಾಗಿ ಬದುಕಬೇಕೆಂಬ ಹಂಬಲ ಇನ್ನೊಂದೆಡೆ, ಹೆಂಡತಿ ಪ್ರಭಾವದಲ್ಲಿ ಸಿಕ್ಕು ತೊಳಲಾಡಿ ಕಮರಿಹೋಗುವ ಇಬ್ಬಂದಿ ಸ್ಥಿತಿಯಲ್ಲಿದ್ದಾನೆ. ಈ ಸಣ್ಣಯ್ಯನ ಮಕ್ಕಳು ದಲಿತರ ಮುಂದಿನ ತಲೆಮಾರಿನ ಅಸಹಾಯಕ ಪ್ರತಿನಿಧಿಗಳಾಗಿದ್ದಾರೆ. ಮೂರನೆಯ ಮಗ ಗುರುಸಿದ್ದು ಸಾಂಪ್ರದಾಯಿಕ ದಾಸ್ಯತ್ವ ಒಪ್ಪಿಕೊಳ್ಳದೆ ಪ್ರಜಾಪ್ರಭುತ್ವದ ಉನ್ನತಿಯ ಹಕ್ಕು ಹೊಂದುವ ಹೋರಾಟದ ಪ್ರತಿನಿಧಿಯಾಗಿದ್ದಾನೆ. ಸಮರ್ಥವಾಗಿ ಹೋರಾಟ ಮಾಡಲಾಗದ ಸ್ಥಿತಿಯಲ್ಲಿ ದಲಿತರ ನೋವು-ಅವಮಾನಗಳಿಂದ ಪಾರಾಗಲು ಮಾರಿಗುಡಿ, ನಾಟಕ ಕಲೆಯ ಮೊರೆಹೋಗಿದ್ದಾನೆ.
ಕಥಾನಾಯಕಿ ಸಾಕವ್ವನ ಹಿರಿಮಗಳು ಗೌರಮ್ಮ ಗಂಡನಿಂದ ದೂರತಳ್ಳಲ್ಪಟ್ಟು ತವರಿನ ಹಂಗಿನರಮನೆಯ ಹಟ್ಟಿಯಲ್ಲಿ ರೋಗಿಷ್ಟ ಹಿರಿಮಗನನ್ನು, ಕಿರಿಮಗನನ್ನು ಬೆಳೆಸಬೇಕಾದ ಅಸಹಾಯಕ ಮಹಿಳೆಯ ಪ್ರತಿನಿಧಿಯಾಗಿದ್ದಾಳೆ. ಈಕೆಯ ಎಲ್ಲಾ ರೀತಿಯ ಸಮಸ್ಯೆಗಳಿಗೆ ಭವಿಷ್ಯದ ಪರಿಹಾರವೆಂಬಂತೆ ಕಂಡು ಬರುವ ಶಿವು ಶಿಕ್ಷಣ ಪಡೆಯುವ ಹಂಬಲದ ಬಾಲಕನಾಗಿದ್ದಾನೆ. ತಾಯಿ ಮತ್ತು ರೋಗಿಷ್ಟ ಸಹೋದರನನ್ನು ಸಾಕಬೇಕಾದ ಜವಾಬ್ದಾರಿ ಮತ್ತು ತಮ್ಮ ಇಂದಿನ ಸ್ಥಿತಿಗೆ ಕಾರಣವಾದ ತಂದೆಯ ವ್ಯಕ್ತಿತ್ವಕ್ಕೆ ಪ್ರತಿರೋಧವಾಗಿ ಬೆಳೆಯುವ ವ್ಯಕ್ತಿಯಾಗಿದ್ದಾನೆ. ಅಲ್ಲದೆ ಇಡೀ ಕಾದಂಬರಿಯ ದಲಿತರ ನೋವಿನ ಬಿಡುಗಡೆಯ ಅಶಾವಾದದ ವಿಶಿಷ್ಟ ಸಂಕೇತವಾಗಿದ್ದಾನೆ. ಇಂತಹ ಜೀವನ್ಮುಖಿ ಧೋರಣೆಯ ಶಿವುನ ಪಾತ್ರಕ್ಕೆ ಅದಮ್ಯ ಚೇತನ ತುಂಬುವವಳು ಆತನ ಚಿಕ್ಕಮ್ಮ ಪುಟ್ಟಗೌರಿ. ತನ್ನ ಹದಿಹರೆಯದ ಸುಂದರ ಕನಸು ಕಲ್ಪನೆಗೆ ಗೋಡೆ ಮೇಲೆ ನವಿಲಿನ ಚಿತ್ತಾರ ಬರೆಯುವ ಹುಮ್ಮಸ್ಸಿನವಳಾಗಿದ್ದಾಳೆ. ಏಕಕಾಲಕ್ಕೆ ತನ್ನ ಕುಟುಂಬದ ಚಕ್ರವ್ಯೂಹದಿಂದ ಮತ್ತು ದಲಿತ ಅವಮಾನದಿಂದ ಬಿಡುಗಡೆ ಹೊಂದುವ ರೂಪಕವಾಗಿದ್ದಾಳೆ. ಸಣ್ಣಯ್ಯನ ಹೆಂಡತಿ ಚಲುವಮ್ಮ ಗಂಡನನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಂಡು ಅತ್ತೆಮನೆಯ ಅಧಿಕಾರ ಸೂತ್ರವನ್ನು ತನ್ನ ಕೈಯಲ್ಲಿರಿಸಿಕೊಳ್ಳಬೇಕೆಂಬ ಹಠದ ಸ್ವಭಾವದವಳಾಗಿದ್ದಾಳೆ. ತವರು ಮನೆಯ ಅಲ್ಪ ಮಟ್ಟಿನ ಸಿರಿವಂತಿಕೆಯನ್ನು ತನ್ನ ಬೆಳವಣಿಗೆಗೆ ಪೂರಕವಾಗಿ ಬಳಸಿಕೊಂಡಿದ್ದಾಳೆ.
ಪ್ರಜಾಪ್ರಭುತ್ವದ ಅಧಿಕಾರಶಾಹಿಯ ದರ್ಪ ದೌರ್ಜನ್ಯವನ್ನು ಅಭಿವ್ಯಕ್ತಗೊಳಿಸುವ ಇನ್ಸ್‌ಪೆಕ್ಟರ್ ಮತ್ತು ಅವನ ಸಹಾಯಕರು ವ್ಯವಸ್ಥೆಯ ಒಂದು ಮುಖಕ್ಕೆ ನಿದರ್ಶನವಾಗಿದ್ದರೆ, ದಫೇದಾರ ರೇವಣ್ಣ ಪೊಲೀಸ್ ಇಲಾಖೆಯ ಇನ್ನೊಂದು ಮುಖಕ್ಕೆ ನಿದರ್ಶನವಾಗಿದ್ದಾರೆ.
ಕಾಳಣ್ಣ ಕದ್ದುತಂದ ಕಡಲೆ ಕಾಯಿಗಳನ್ನು ಹಂಚಿಕೊಂಡು ತಿನ್ನುವ ಈ ಕುಟುಂಬ ಇನ್ನೊಬ್ಬರ ಹಸಿವನ್ನು ಹಿಂಗಿಸಲು ಸಹಾಯ ಹಸ್ತ ಚಾಚುತ್ತದೆ. ನೆರೆಮನೆಯವರಿಗೆ ಕದ್ದ ಕಡಲೆಕಾಯಿಯಲ್ಲಿಯೆ ಪಾಲುಕೊಡುವುದು, ಕಡಲೆಕಾಯಿ ತಿಂದು ಸಾಕ್ಷಿ ಉಳಿಯದಂತೆ ಸಿಪ್ಪೆಗಳನ್ನು ಬೆಂಕಿಯಲ್ಲಿ ಹಾಕಿ ಸುಡುವುದು, ಅದೇ ಬೆಂಕಿಯ ಬೆಳಕಿನಲ್ಲಿ ಹೊಸ ಬದುಕಿನ ಕನಸನ್ನು ಕಾಣುವುದು ಈ ಕಾದಂಬರಿಯ ವಿಶಿಷ್ಟ ಸಂಗತಿಯಾಗಿದೆ.
ಎತ್ತಪ್ಪನವರ ದನದ ಹಟ್ಟಿಯಲ್ಲಿ ಇರುವ ದಷ್ಟಪುಷ್ಟ ಹಸು-ಎತ್ತುಗಳು, ದವಸ-ಧಾನ್ಯಗಳು ಸಂಪತ್ತು ಒಂದೇ ಕಡೆ ಕೇಂದ್ರಿತವಾಗಿದೆ ಎಂಬುದಕ್ಕೆ ಸಾಕ್ಷಿ ನುಡಿಯುತ್ತವೆ. ದಲಿತರ ಹಸಿವು ಎಷ್ಟು ತೀವ್ರವಾಗಿದೆ ಎಂದರೆ ಎತ್ತಪ್ಪನವರ ಒಂದು ಎತ್ತು ಸತ್ತುಹೋದರೆ ಇಡೀ ಕೇರಿಯ ದಲಿತರ ಹಸಿವನ್ನು ನೀಗಿಸುತ್ತದೆ ಎಂಬ ಕರಾಳ ಬಯಕೆ ಶೋಷಣೆಯ ಬದುಕಿನ ದರ್ಶನ ಮಾಡಿಸುತ್ತದೆ.
ಎತ್ತಪ್ಪನವ ಕಡಲೆಕಾಯಿ ಕಳ್ಳತನವನ್ನು ಪತ್ತೆ ಮಾಡಿ , ಶಿಕ್ಷೆಕೊಡಲು ಆಸಕ್ತಿ ತೋರುವ ಪೊಲೀಸ್ ಇಲಾಖೆ ಸಾಕವ್ವನ ಕಳೆದ ಹುಂಜದ ಬಗ್ಗೆ ಮೌನ ತಾಳುತ್ತದೆ. ಇದಕ್ಕಿಂತ ಕ್ರೂರವಾದ ಸಂಗತಿಯೆಂದರೆ ಕಳೆದುಹೋದ ಹುಂಜವನ್ನು ಹುಡುಕಿಕೊಡುವದಕ್ಕಾಗಿ ಸಾಕವ್ವನ ಮತ್ತೊಂದು ಹುಂಜವನ್ನು ತಿನ್ನುವ ಪೊಲೀಸ ಭ್ರಷ್ಟಚಪಲತೆ ಇಂದಿನ ಆಡಳಿತ ವ್ಯವಸ್ಥೆಯ ದರ್ಶನ ಮಾಡಿಸುತ್ತದೆ. ಕಳೆದುಹೋದ ಹುಂಜ ಹುಡುಕಿ ಕೊಡಬೇಕಾದ ಇಲಾಖೆ ಮತ್ತೊಂದು ಹುಂಜವನ್ನು ಕಬಳಿಸುವ ಸನ್ನಹದಲ್ಲಿದೆ. ಈ ದುರಂತ ಬಡವರ, ದಲಿತರ ಒಡಲಾಳದ ಬೆಂಕಿ ಪ್ರಜ್ವಲಿಸಲು ಕಾರಣವಾಗಿದೆ.
ದಲಿತರ ಸಹಜ ಆಡುನುಡಿ, ರೂಪಕಶಕ್ತಿಯ ನಿರೂಪಣೆ, ಕಠೋರ ವಾಸ್ತವ ಘಟನೆ, ನೈಜತೆಯಿಂದ ತುಂಬಿರುವ ಪಾತ್ರಗಳು, ಹೊಸ ವಿನ್ಯಾಸದಲ್ಲಿ ಬಳಸಿದ ಭಾಷೆ ಕಾದಂಬರಿಯ ಯಶಸ್ಸನ್ನು ಸಾರುತ್ತವೆ. ಸಂಯಮಶೀಲ ದೇವನೂರ ಮಹಾದೇವ ಅವರ ಸಾಹಿತ್ಯ ಸೃಷ್ಟಿಯ `ಮಾಸ್ಟರ್ ಪೀಸ್ ಈ ಒಡಲಾಳ ಎಂಬ ವಿಮರ್ಶಕರ ಮಾತು ಸಮರ್ಪಕವಾಗಿದೆ. ಸಾಮಾನ್ಯ ಓದುಗನಿಗೂ ಸಹ ಅದೇ ಅನುಭೂತಿಯನ್ನು ನೀಡುತ್ತದೆ ; ಅದ್ಭುತ ಕಲಾಕೃತಿಯಾಗಿ ಗಮನಸೆಳೆಯುತ್ತದೆ. *****

No comments:
Post a Comment